Actor Prakash Rai says 'did not know Mohammad Nalapad was so cruel'. He talked to media in Mysuru and lambasted on BJP and Pratap Simha and Ananth Kumar Hegde. <br /> <br />ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿದ್ವತ್ ಮೇಲಿನ ಹಲ್ಲೆ ಆರೋಪಿ ಮೊಹಮ್ಮದ್ ನಲಪಾಡ್‌ನನ್ನು ಈ ಹಿಂದೆ ಹೊಗಳಿದ್ದ ನಟ ಪ್ರಕಾಶ್ ರೈ ಅವರು ಆಗಿನ ತಮ್ಮ ಹೇಳಿಕೆಯಿಂದ ಮುಜುಗರವಾಗಿದೆ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ���ಲಪಂಥದವರು ಒಂದೇ ಕಡೆ ಸೇರಿದ್ದು ಒಳ್ಳೆಯದು ಅಂತಾ ಹೇಳಿದ್ದೆ. ಆ ಯುವಕ ಒಳ್ಳೆಯವನು ಅಂತಾ ಕೂಡಾ ಹೇಳಿದ್ದೆ. ವೇದಿಕೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದ. ಆದರೆ ಆ ಯುವಕ ಅಷ್ಟೋಂದು ಕ್ರೂರಿ ಅಂತಾ ಗೊತ್ತಿರಲಿಲ್ಲ. ಇನ್ನು ಮುಂದೆ ಆಲೋಚನೆ ಮಾಡಿ ಮಾತನಾಡಬೇಕಾದ ಪರಿಸ್ಥಿತಿ ಇದೆ. ವಿದ್ವತ್ ಮೇಲಿನ ಹಲ್ಲೆಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ. <br />